ಇದ್ದಕ್ಕಿದ್ದಂತೆ ನಾಪತ್ತೆ

ಪಕ್ಕದಲ್ಲಿ ನೀ ಮಲಗಿರಲು,
ನಿನ್ನ ಉಸಿರ ಲಹರಿಯನ್ನೇ ನೋಡುತ್ತಾ ನಾನಿರಲು,
ಸಮಯದ ಪರಿವೆ ತಿಳಿಯಲಿಲ್ಲ,
ಅದಾಗಲೇ ಆಗಿಹೋಗಿತ್ತು ಹಗಲು!
Advertisements

Thank you!

ನಾ ನಿನ್ನ ಪ್ರೀತಿಸುವುದರ ಅರಿವು ನಿನಗಿದೆಯೋ ನಾ ಕಾಣೆ. 
ಇರಲಿ ಇರದಿರಲಿ, ನನ್ನ ಪ್ರೀತಿಯ ರೀತಿಯಲ್ಲಿ ಇರದಿರಲಿ ಯಾವುದೇ ಬದಲಾವಣೆ. 
ಪ್ರೀತಿಸುವುದು ನಿನ್ನನೇ ಆದರೂ, ಅದರ ಸವಿ ಅನುಭೂತಿ ಎಲ್ಲವೂ ನನ್ನದೇ. 
ಗೊತ್ತಿದ್ದೋ ಇಲ್ಲದೆಯೋ ಆ ನನ್ನ ಖುಷಿಗೆ ನೀನಾಗಿರುವೆ ಕಾರಣ. ಅದಕ್ಕೆ ನಾನು ಸದಾ ಧನ್ಯ!

ಸದ್ಗುರು

ಸರಾಗವಲ್ಲ ಸಾತ್ವಿಕ ಬದುಕು
ಸದ್ಗುರುವಿರದೆ, ಸರಾಗವಲ್ಲ ಸಾತ್ವಿಕ ಬದುಕು

ಅನುದಿನ ನಮ್ಮಯ ನಡುವಳಿಕೆಗಳು
ಗುರುವಿನಿಂದ ನಮ್ಮಯ ಕಲಿಕೆಗಳು

ಕಲ್ಲು ಕೋಟೆಯಲ್ಲಲ್ಲ. ಗಿರಿಯ ತುದಿಯಲ್ಲಲ್ಲ.
ಗುರುವಿರುವುದು ನಮ್ಮೆಲ್ಲರ ನಡುವೆ.
ಗೆಳೆಯರಲ್ಲಿ, ಸಂಬಂಧಿಗಳಲ್ಲಿ
ಪಂಚೇಂದ್ರಿಯಗಳ ಒಡನಾಡಿಗಳಲ್ಲಿ

ಸಾತ್ವಿಕ ಆಲೋಚನೆಗಳು
ಸದ್ಗುರುವಿನ ಉಡುಗೊರೆಗಳು

ನಮ್ಮೆಲ್ಲರ ಬಾಳಿನ ಹಂತ-ಹಂತದಲಿ
ಅಂತಹ ಸದ್ಗುರುವಿನ ಕರುಣೆ ದೊರೆಯಲಿ
ಮೊಕ್ಷದೆಡೆಗೆ ದಾರಿ ತೋರಲಿ

ಸರಾಗವಲ್ಲ ಸಾತ್ವಿಕ ಬದುಕು
ಸದ್ಗುರುವಿರದೆ, ಸರಾಗವಲ್ಲವೇ ಅಲ್ಲ ಸಾತ್ವಿಕ ಬದುಕು.

ಪದಕುಸಿಯೇ ನೆಲವಿಹುದು

ಕನಸಿನ ಗೋಪುರ ಕಟ್ಟಿ ಏರುವಾಗ
ಕಾಲು ಜಾರುವ ಭಯ ಬರಲು
ಪದಕುಸಿಯೇ ನೆಲವಿಹುದೆಂಬ
ಕಗ್ಗದ ಸಾಲು ನೆನೆನೆನೆದು ಏರುತ್ತಿರು.

ಇವತ್ತು ಮಳೆಯಿರಲಿ ಬಿಸಿಲಿರಲಿ
ನಾಳೆಯೆಂದೂ ಬರಲಿದೆ
ಬಾಳಲಿ ಅಳುವಿರಲಿ ನಗುವಿರಲಿ
ಬದಲಾವಣೆ ಹತ್ತಿರದಲ್ಲೇ ಕಾದಿದೆ

ಓದನ್ನು ಮುಂದುವರೆಸಿ